ರಾಗ : ಅಠಾಣ
ತಾಳ: ಆದಿ
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಗೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಯಮಗೆ ನಮ್ಮ ಕೂಡಲಸಂಗಮದೇವರ ಚಿಂತೆ

Category:ವಚನ ಸಾಹಿತ್ಯ

Category:ಬಸವಣ್ಣನವರ ವಚನಗಳು